ಬೆಳಗಾವಿಯಲ್ಲಿ ಬೋಡೋ ಉಗ್ರನನ್ನು ಬಂಧಿಸಿದ ಅಸ್ಸಾಂ ಪೊಲೀಸರು

ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆಯಲ್ಲಿ ತರಬೇತಿ ಪಡೆದಿದ್ದ ಬೋಡೋ ಉಗ್ರನನ್ನು ಬೆಳಗಾವಿಯಲ್ಲಿ ಬಂಧಿಸಲಾಗಿದೆ. ಪೊಲೀಸರ ಕಣ್ತಪ್ಪಿಸುವ ಸಲುವಾಗಿ, ದಕ್ಷಿಣ ಭಾರತದ ಕಡೆಗೆ ಮುಖ ಮಾಡಿದ್ದ ಎಂದು ತಿಳಿದು ಬಂದಿದೆ. ಬೆಳಗಾವಿಯ ರಾಯಭಾಗ ತಾಲೂಕಿನ ಯಡ್ರಾವ್ ಗ್ರಾಮದ ಬಳಿ, ಶಂಕಿತನನ್ನು ಬಂಧಿಸಲಾಗಿದೆ. ಪ್ರುಸ್ನಾ ಫಿರ್ಲಾಂಗ್ (19) ಬಂಧಿತ ಯುವಕ. ಅಸ್ಸಾಂ ಮೂಲದ ಈತನನ್ನು ಅಲ್ಲಿಯ ಪೊಲೀಸರು ಬಹು ತಿಂಗಳಿಂದ ಶೋಧಿಸುತ್ತಿದ್ದರು. ಈತ ಬೆಳಗಾವಿಗೆ ಬಂದು ನೆಲೆಸಿದ್ದ. ಶಂಕಿತ ಪ್ರುಸ್ನಾ ಫಿರ್ಲಾಂಗ್, ಮಯನ್ಮಾರ್ನಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಮರಳಿದ್ದ. ಈತನ ಮೇಲೆ… Read More ಬೆಳಗಾವಿಯಲ್ಲಿ ಬೋಡೋ ಉಗ್ರನನ್ನು ಬಂಧಿಸಿದ ಅಸ್ಸಾಂ ಪೊಲೀಸರು

ಭಾರತದಲ್ಲಿದ್ದಾರೆ ಐದು ಬಗೆಯ ಭಯೋತ್ಪಾದಕರು

Understanding Terrorism 1  ಭಾರತದೊಳಗಿನ ಭಯೋತ್ಪಾದನಾ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ, ಈ ಐದು ಕಾನ್ಸೆಪ್ಟ್ಗಳನ್ನು ತಿಳಿಯುವುದು ಅನಿವಾರ್ಯ. ಇವುಗಳ ತಳಹದಿಯ ಮೇಲೆಯೇ, ಉಗ್ರ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಆ ಬಗೆಗಳು ಯಾವುದಂದರೆ.. 1. Ethno Nationalist Terrorism 2. Religious Terrorism 3. Left Wing Terrorism 4. Narco Terrorism 5. Cyber Terrorism ಭಾರತದಲ್ಲಿ ಭಯೋತ್ಪಾದನಾ ಸಂಘಟನೆಗಳನ್ನು, ಈ ಐದು ರೀತಿ ವರ್ಗೀಕರಿಸಲಾಗುತ್ತದೆ. ಗುಪ್ತಚರ ಸಂಸ್ಥೆ (IB), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ವಿವಿಧ ರಾಜ್ಯಗಳ… Read More ಭಾರತದಲ್ಲಿದ್ದಾರೆ ಐದು ಬಗೆಯ ಭಯೋತ್ಪಾದಕರು

KARNATAKA TERRORISM TIMELINE 2016

ಕರ್ನಾಟಕ 2016 ಜನವರಿ  ದಿನಾಂಕ ಸ್ಥಳ ಸಂಘಟನೆ ಘಟನೆ ವಿವರ ಜ. 6 ಬೆಂಗಳೂರು ಅಲ್ ಖೈದಾ ಬನಶಂಕರಿಯಲ್ಲಿ ನಾಲ್ಕು ವರ್ಷದಿಂದ ಮೌಲ್ವಿಯಾಗಿದ್ದ ಅನ್ಜರ್ ಷಾ ಬಂಧನ. ರಾಜ್ಯದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು ಎಂದು NIA ತಿಳಿಸಿದೆ. ಜ. 13 ಬೆಂಗಳೂರು ಸಿಮಿ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣ ಸಂಬಂಧ NIA ಅಧಿಕಾರಿಗಳು ವಿಡಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಶಂಕಿತನ ಚಲನವಲನ ಗುರುತಿಸಬಹುದಾಗಿದೆ. ಈತನ ಕುರಿತು ಮಾಹಿತಿ ನೀಡಿದವರಿಗೆ ಐದು ಲಕ್ಷ ರೂ.… Read More KARNATAKA TERRORISM TIMELINE 2016

ಮೈಸೂರು ಸ್ಫೋಟ : ಸ್ಥಳೀಯ ಪೊಲೀಸರಿಂದ ಕೇಂದ್ರಿಯ ಸಂಸ್ಥೆಗೆ ತನಿಖೆ ವರ್ಗ

ಮೈಸೂರು ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ತನಿಖೆಯನ್ನು, ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಲಾಗಿದೆ. ಈ ಬಗ್ಗೆ ಅಂತಿಮ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ವಿವರ : 2016ರ ಆಗಸ್ಟ್ 1ರಂದು, ಸಂಜೆ 4 ಗಂಟೆಗೆ, ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟಿಸಿತ್ತು. ಸ್ಫೋಟದ ತೀವ್ರತೆಗೆ, ಶೌಚಾಲಯದ ಕಿಟಕಿ ಗಾಜುಗಳು ಪುಡಿಯಾಗಿದ್ದವು. ಸ್ಫೋಟದ ಬಳಿಕ ಎನ್‌ಐಎ ಅಧಿಕಾರಿಗಳು, ಅಂಧ್ರ ಮತ್ತು ಕೇರಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. NIAಗೆ ಪ್ರಕರಣ… Read More ಮೈಸೂರು ಸ್ಫೋಟ : ಸ್ಥಳೀಯ ಪೊಲೀಸರಿಂದ ಕೇಂದ್ರಿಯ ಸಂಸ್ಥೆಗೆ ತನಿಖೆ ವರ್ಗ

17 ಖಾತೆಗಳ, 38 ಕೋಟಿ ರೂಪಾಯಿ ಮೇಲೆ ಎನ್ಐಎ ಕೆಂಗಣ್ಣು

ನಾಲ್ಕು ಪ್ರಮುಖ ಬ್ಯಾಂಕ್‌ಗಳ 17 ಖಾತೆಗಳಲ್ಲಿನ, 38 ಕೋಟಿ ರೂಪಾಯಿ ಚಲಾವಣೆ ಬಗ್ಗೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೆಂಗಣ್ಣು ಬೀರಿದೆ. ಈ ಹಣ ಉಗ್ರ ಚಟುವಟಿಕೆಗೆ ಬಳಕೆ ಆಗಿರುವ ಬಗ್ಗೆ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ, ಎನ್‌ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಹಿಜ್ಬುಲ್ ಮುಜಾಹಿದ್ದಿನ್ ಮುಖಂಡ ಬುರ್ಹಾನ್ ವಾನಿ ಹತ್ಯೆ ಬಳಿಕ, ಕಾಶ್ಮೀರದಲ್ಲಿ ಅಶಾಂತಿ ನೆಲೆಸಿತ್ತು. ಈ ಅವಧಿಯಲ್ಲಿ 38 ಕೋಟಿ ರೂಪಾಯಿ ಅನುಮಾನಾಸ್ಪದವಾಗಿ ಚಲಾವಣೆ ಆಗಿದೆ. ಇದರ ಬಗ್ಗೆ ಎನ್ಐಎ ವಿಚಾರಣೆ ಆರಂಭಿಸಿದ್ದು,… Read More 17 ಖಾತೆಗಳ, 38 ಕೋಟಿ ರೂಪಾಯಿ ಮೇಲೆ ಎನ್ಐಎ ಕೆಂಗಣ್ಣು

ಮೈಸೂರು ಸ್ಫೋಟ : ಬೆಂಗಳೂರಿನಲ್ಲಿ ಅಲ್ ಉಮ್ಮಾ ಉಗ್ರನ ವಿಚಾರಣೆ

ಮೈಸೂರು ಸ್ಫೋಟ ಸಂಬಂಧ ಪೊಲೀಸರು ಅಲ್‌ ಉಮ್ಮಾ ಸಂಘಟನೆಯ ಶಂಕಿತ ಉಗ್ರನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಲ್ಲೇಶ್ವರಂ ಸ್ಫೋಟ ಪ್ರಕರಣ ಸಂಬಂಧ, ಇತ್ತೀಚೆಗಷ್ಟೇ ಈತನನ್ನು ಬೆಂಗಳೂರು ಕೇಂದ್ರಿಯ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಬಂಧಿಸಿದ್ದರು. ಆಗಸ್ಟ್ 1ರಂದು ಮೈಸೂರು ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ದಾಳಿಯ ಹಿಂದೆ ಅಲ್‌ ಉಮ್ಮಾ ಉಗ್ರ ಸಂಘಟನೆಯ ಕೈವಾಡದ ಬಗ್ಗೆ ಗುಮಾನಿ ಇತ್ತು. ಈ ಮಧ್ಯೆ, ಆಗಸ್ಟ್ 16ರಂದು ಬೆಂಗಳೂರು ಸಿಸಿಬಿ ಪೊಲೀಸರು, ಮೊಹಮದ್ ಅಲಿ ಖಾನ್ ಕುಟ್ಟಿಯನ್ನು ಬಂಧಿಸಿದ್ದರು. ಹೆಚ್ಚಿನ… Read More ಮೈಸೂರು ಸ್ಫೋಟ : ಬೆಂಗಳೂರಿನಲ್ಲಿ ಅಲ್ ಉಮ್ಮಾ ಉಗ್ರನ ವಿಚಾರಣೆ

ಓಆರ್‌ಓಪಿ : ಆ.22ರಂದು ಬೆಂಗಳೂರಿನಲ್ಲಿ ಮಾಜಿ ಸೈನಿಕರೊಂದಿಗೆ ಸಂವಾದ

ಏಕ ಶ್ರೇಣಿ ಏಕ ಪಿಂಚಣಿ (ಓಆರ್‌ಓಪಿ) ಯೋಜನೆ ಅನುಷ್ಠಾನದ ಸಂದರ್ಭದಲ್ಲಿನ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಮಾಜಿ ಸೈನಿಕರು ಹಾಗೂ ಅವರ ಸಹವರ್ತಿಗಳೊಂದಿಗೆ ನೇರ ಸಂವಾದ ನಡೆಸಲು ನ್ಯಾ. ನರಸಿಂಹ ರೆಡ್ಡಿ ನಿರ್ಧರಿಸಿದ್ದಾರೆ. ಆ.22ರಂದು ಬೆಂಗಳೂರಿನ ಜಾಲಹಳ್ಳಿಯ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಸಂವಾದ ನಿಗದಿ ಮಾಡಲಾಗಿದೆ. ಓಆರ್‌ಓಪಿ ಅನುಷ್ಠಾನದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು, ಕೇಂದ್ರ ಸರ್ಕಾರ, ಪಾಟ್ನಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನ್ಯಾ.ನರಸಿಂಹ ರೆಡ್ಡಿ ಅವರ ನೇತೃತ್ವದಲ್ಲಿ, ನ್ಯಾಯಾಂಗ ಸಮಿತಿ ರಚಿಸಿದೆ. ದೇಶದ ಹಲವೆಡೆ ಈ ಸಮಿತಿ, ಮಾಜಿ… Read More ಓಆರ್‌ಓಪಿ : ಆ.22ರಂದು ಬೆಂಗಳೂರಿನಲ್ಲಿ ಮಾಜಿ ಸೈನಿಕರೊಂದಿಗೆ ಸಂವಾದ