ಬೆಂಗಳೂರಿನಲ್ಲಿ ವಾಯುಪಡೆಯ ದ್ವೈವಾರ್ಷಿಕ ಸಮಾವೇಶ, ಎಲ್ಲಾ ಕಮಾಂಡ್‌ನ ಅಧಿಕಾರಿಗಳು ಭಾಗಿ

Air Marshal SRK Nair and Air Marshal PP Khandekar with the delegates of Senior Maintenance Staff Officers' Conclave
ಸಮಾವೇಶದಲ್ಲಿ ಭಾಗಿ ಆಗಿರುವ ವಾಯುಪಡೆ ಅಧಿಕಾರಿಗಳು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯುಪಡೆಯ ದ್ವೈವಾರ್ಷಿಕ ಸಮಾವೇಶ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ರಾಜಧಾನಿ ದೆಹಲಿಯಿಂದ ಹೊರಗೆ ಎರಡು ದಿನದ ಸಮಾವೇಶ ಆಯೋಜಿಸಲಾಗಿದೆ.

ಸಮಾವೇಶದ ಉದ್ದೇಶ?

ವಾಯುಪಡೆಯ ಯೋಜನೆಗಳು ಮತ್ತು ಅವುಗಳ ಅನುಷ್ಠಾನ ಸಂಬಂಧ ಚರ್ಚೆ ನಡೆಸಲು ಸಮಾವೇಶ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿರುವ ವಾಯುಪಡೆ ತರಬೇತಿ ಕಮಾಂಡ್‌ನ ಕೇಂದ್ರ ಕಚೇರಿಯಲ್ಲಿ ಸಮಾವೇಶ ನಡೆಯುತ್ತಿದೆ. ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯಗಳು ಮತ್ತು ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಆಧುನಿಕ ತಂತ್ರಜ್ಞಾನದ ಕುರಿತು ಸಮಾವೇಶದಲ್ಲಿ ಪ್ರಾತ್ಯಕ್ಷಕಿ ನೀಡಲಾಗುತ್ತಿದೆ.

ಸಮಾವೇಶದಲ್ಲಿ ಭಾಗವಹಿಸುವವರು..

ದೆಹಲಿ ವಾಯುಪಡೆಯ ನಿರ್ವಹಣಾ ವಿಭಾಗದ ಮುಖ್ಯಸ್ಥ ಏರ್‌ ಮಾರ್ಷಲ್ ಪಿ.ಪಿ.ಖಂಡೇಕರ್ ಅವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯುತ್ತಿದೆ. ವಾಯುಪಡೆಯ ಎಲ್ಲಾ ಕಮಾಂಡ್‌ಗಳ ಹಿರಿಯ ನಿರ್ವಹಣಾ ಅಧಿಕಾರಿಗಳು ಮತ್ತು ವಾಯುಪಡೆ ಕೇಂದ್ರ ಕಚೇರಿಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

ಹೆಚ್‌ಎಲ್‌ಗೆ ಭೇಟಿ..

ಸಮಾವೇಶದ ಪ್ರತಿನಿಧಿಗಳು ಸೆಂಟರ್‌ ಫಾರ್ ಏರ್‌ಬೋರ್ನ್‌ ಸಿಸ್ಟಮ್ಸ್‌ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ಗೂ ಭೇಟಿ ನೀಡಲಿದ್ದಾರೆ. ವಾಯುಪಡೆಗೆ ಸಂಬಂಧಿಸಿ ಪ್ರಗತಿಯಲ್ಲಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ.

—————-

 A two-day  bi-annual Senior Maintenance Staff Officers’ Conclave of the Indian Air Force  began  at Headquarters Training Command, Indian Air Force, Bengaluru  today. The conclave is conducted under the chairmanship of Air Marshal PP Khandekar, Air Officer-in-Charge Maintenance, Air Headquarters, New Delhi. The conclave which is traditionally conducted at  Air Headquarters, New Delhi has first time moved out to garden city for the current edition. Senior Maintenance Staff Officers of all the commands and several top dignitaries from Air Headquarters are attending the conclave.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s