ಮೈಸೂರು ಸ್ಫೋಟ : ಬೆಂಗಳೂರಿನಲ್ಲಿ ಅಲ್ ಉಮ್ಮಾ ಉಗ್ರನ ವಿಚಾರಣೆ

ಮೈಸೂರು ಸ್ಫೋಟ ಸಂಬಂಧ ಪೊಲೀಸರು ಅಲ್‌ ಉಮ್ಮಾ ಸಂಘಟನೆಯ ಶಂಕಿತ ಉಗ್ರನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಲ್ಲೇಶ್ವರಂ ಸ್ಫೋಟ ಪ್ರಕರಣ ಸಂಬಂಧ, ಇತ್ತೀಚೆಗಷ್ಟೇ ಈತನನ್ನು ಬೆಂಗಳೂರು ಕೇಂದ್ರಿಯ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಬಂಧಿಸಿದ್ದರು.

ಆಗಸ್ಟ್ 1ರಂದು ಮೈಸೂರು ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ದಾಳಿಯ ಹಿಂದೆ ಅಲ್‌ ಉಮ್ಮಾ ಉಗ್ರ ಸಂಘಟನೆಯ ಕೈವಾಡದ ಬಗ್ಗೆ ಗುಮಾನಿ ಇತ್ತು. ಈ ಮಧ್ಯೆ, ಆಗಸ್ಟ್ 16ರಂದು ಬೆಂಗಳೂರು ಸಿಸಿಬಿ ಪೊಲೀಸರು, ಮೊಹಮದ್ ಅಲಿ ಖಾನ್ ಕುಟ್ಟಿಯನ್ನು ಬಂಧಿಸಿದ್ದರು. ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಮೈಸೂರು ಪೊಲೀಸರು ಕುಟ್ಟಿಯ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಸಮೀಪ ಸ್ಫೋಟ ಸಂಭವಿಸಿತ್ತು. ಪ್ರಕರಣ ಸಂಬಂಧ, ಸತ್ಯಮಂಗಲದಿಂದ ಕುಟ್ಟಿಯನ್ನು ಬಂಧಿಸಲಾಗಿತ್ತು. ಚಾರಿಟೇಬಲ್ ಟ್ರಸ್ಟ್ ಫಾರ್ ಮೈನೊರಿಟೀಸ್ (ಸಿಟಿಎಂ) ಜೊತೆ ನಂಟು ಹೊಂದಿದ್ದರಿಂದ, ಮೈಸೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s