ಮೈಸೂರು ಸ್ಫೋಟ : ಸ್ಥಳೀಯ ಪೊಲೀಸರಿಂದ ಕೇಂದ್ರಿಯ ಸಂಸ್ಥೆಗೆ ತನಿಖೆ ವರ್ಗ

ಮೈಸೂರು ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ತನಿಖೆಯನ್ನು, ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಲಾಗಿದೆ. ಈ ಬಗ್ಗೆ ಅಂತಿಮ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ವಿವರ :
2016ರ ಆಗಸ್ಟ್ 1ರಂದು, ಸಂಜೆ 4 ಗಂಟೆಗೆ, ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟಿಸಿತ್ತು. ಸ್ಫೋಟದ ತೀವ್ರತೆಗೆ, ಶೌಚಾಲಯದ ಕಿಟಕಿ ಗಾಜುಗಳು ಪುಡಿಯಾಗಿದ್ದವು. ಸ್ಫೋಟದ ಬಳಿಕ ಎನ್‌ಐಎ ಅಧಿಕಾರಿಗಳು, ಅಂಧ್ರ ಮತ್ತು ಕೇರಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

NIAಗೆ ಪ್ರಕರಣ ವರ್ಗಾಯಿಸಿದ್ದೇಕೆ?
ಸ್ಫೋಟದ ಹಿಂದೆ ಅಲ್‌ ಉಮ್ಮಾ ಅಥವಾ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಉಗ್ರ ಸಂಘಟನೆಗಳ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮೈಸೂರಿನಲ್ಲಿ ನ್ಯಾಯಾಲಯ ಸ್ಫೋಟ ಮಾದರಿಯಲ್ಲಿಯೇ, ಕೇರಳದ ಕೊಲ್ಲಂ ಮತ್ತು ಆಂಧ್ರಪ್ರದೇಶದ ಚಿತ್ತೂರಿನ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿತ್ತು. ಮೂರು ಪ್ರಕರಣದಲ್ಲಿ ಒಂದೇ ಸಂಘಟನೆ ಅಥವಾ ಒಂದೇ ತಂಡ ಅಥವಾ ಒಬ್ಬನದ್ದೇ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆದ್ದರಿಂದ ಈ ಪ್ರಕರಣದ ವ್ಯಾಪ್ತಿ ಮೂರು ರಾಜ್ಯಗಳಿಗೆ ಹಿಗ್ಗಿದೆ. ಈ ಹಿನ್ನಲೆಯಲ್ಲಿ ಎನ್‌ಐಎಗೆ ವಹಿಸುವುದು ಸೂಕ್ತವೆಂದು ನಿರ್ಧರಿಸಲಾಗಿದೆ ಎಂದು ನಂಬಲರ್ಹ ಮೂಲವೊಂದು ಸ್ಪಷ್ಟಪಡಿಸಿದೆ.

ಪ್ರಕರಣ ವರ್ಗಾವಣೆ ಇಷ್ಟು ತಡವಾಗಿದ್ದೇಕೆ?
ಸ್ಫೋಟ ಪ್ರಕರಣದ ತನಿಖೆಯನ್ನು, ಮೈಸೂರು ಪೊಲೀಸರೇ ನಿರ್ವಹಿಸುತ್ತಿದ್ದರು. ಎನ್ಐಎ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪೊಲೀಸರಿಗೆ ನೆರವು ನೀಡಿದ್ದರು. ಪ್ರಕರಣದ ವ್ಯಾಪ್ತಿ ಮೂರು ರಾಜ್ಯಗಳಾಗಿದೆ. ಆದ್ದರಿಂದ, ಎನ್ಐಎಗೆ ವಹಿಸಲು ಸರ್ಕಾರ ನಿರ್ಧರಿಸಿತು. ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಪತ್ರ ಮುಖೇನ ಮನವಿ ಮಾಡಿತ್ತು. ಕೇಂದ್ರ ಗೃಹ ಇಲಾಖೆ ಪರಿಶೀಲನಾ ಅರ್ಜಿಯನ್ನು ಎನ್‌ಐಎಗೆ ವರ್ಗಾಯಿಸಿತ್ತು. ಈಗ ಎನ್ಐಎ ತನಿಖೆಗೆ ಹಸಿರು ನಿಶಾನೆ ತೋರಿಸಿದ್ದು, ಆದೇಶ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೆಯೂ ಹೀಗೆ ಆಗಿತ್ತು..
2014ರ ಡಿಸೆಂಬರ್ 28ರಂದು ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಸ್ಫೋಟ ಸಂಭವಿಸಿ, ಓರ್ವ ಮಹಿಳೆ ಸಾವನಪ್ಪಿದ್ದರು. ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಬೆಂಗಳೂರು ಪೊಲೀಸರೇ ನಿರ್ವಹಿಸುತ್ತಿದ್ದರು. ಅಂತಾರಾಜ್ಯ ಪ್ರಕರಣ ಅನಿಸಿದ್ದರಿಂದ, ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ತೆಲಂಗಾಣ ಪೊಲೀಸರು ಸಂಶಯದ ಮೇರೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಂಕಿತನೊಬ್ಬನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇರಿಸಿದ್ದು ತಾನೇ ಎಂದು ಒಪ್ಪಿಕೊಂಡಿದ್ದ. ಆತನೇ ಸಿಮಿ ಸಂಘಟನೆಯ ಮಾಜಿ ಕಾರ್ಯಕರ್ತ ಅಲೆಂಜೆಬ್ ಅಫ್ರೀದಿ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲಿದೆ.

————————————————————————–

MYSORE COURT BLAST CASE TO BE HANDED OVER TO NATIONAL INVESTIGATION AGENCY. THERE WAS A BLAST IN COURT PREMISES ON AUGUST 1, 2016. EARLIER, SIMILAR BLASTS TOOK PLACE IN CHITTOR AND KOLLAM COURTS. INVESTIGATORS SUSPECT AL UMMAH OR THE STUDENT ISLAMIC MOVEMENT OF INDIA (SIMI) TERRORIST ORGANISATION’S HAND IN THE THREE BLASTS.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s