ಯೋಧರ ಮೇಲೆ ದಾಳಿ ನಡೆಸಿದ್ದ ಸಲೀಮ್​ಗೆ ಕೈಗೆ ಬೇಡಿ

ನಿಷೇಧಿತ ಲಷ್ಕರ್​-ಎ-ತಯಿಬಾ ಸಂಘಟನೆ ಶಂಕಿತ ಉಗ್ರನನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಯುಎಇಯಿಂದ ವಿಮಾನದಲ್ಲಿ ಬಂದಿಳಿದ ಶಂಕಿತನನ್ನು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. 2008ರಲ್ಲಿ ನಡೆದ ದಾಳಿಯಲ್ಲಿ ಆತನ ಕೈವಾಡ ಇರುವುದು ಋಜುವಾದ ಹಿನ್ನಲೆ, ವಿಚಾರಣೆ ಬಳಿಕ ಬಂಧಿಸಲಾಗಿದೆ.

ಯಾರು ಈ ಶಂಕಿತ ಉಗ್ರ?

ಬಂಧಿತ ಶಂಕಿತನ ಹಸರು ಸಲೀಮ್​ ಮುಖಿಮ್ ಖಾನ್ ಅಲಿಯಾಸ್​ ಅಬು ಅಮ್ರಾರ್​ ಅಲಿಯಾಸ್​ ಅರೀಫ್​. ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಹಾಥ್​ಗಾವ್​​ನವನು. ಸಲೀಮ್​​ ಮುಖಿಮ್​ ಖಾನ್​​ಗಾಗಿ ಲುಕ್​ಔಟ್ ನೊಟೀಸ್ ಜಾರಿಯಾಗಿತ್ತು. ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸಲೀಮ್​ ಮುಖಿಮ್ ಖಾನ್​ನನ್ನು ತಡೆಹಿಡಿದು ಮಹಾರಾಷ್ಟ್ರ ಭಯೋತ್ಪಾದನ ನಿಗ್ರಹ ದಳಕ್ಕೆ (ATS) ಮಾಹಿತಿ ನೀಡಲಾಯಿತು.

ಯಾರು ಸಲೀಮ್​ ಖಾನ್.. ಇವನ ಮೇಲಿರುವ ಆರೋಪಗಳೇನು.?

2008ರಲ್ಲಿ ಉತ್ತರ ಪ್ರದೇಶದ ರಾಮ್​ಪುರದಲ್ಲಿ CRPF ಕ್ಯಾಂಪ್​ನ ಮೇಲೆ ಉಗ್ರರು ಫಿದಾಯಿನ್ ಮಾದರಿ (ಮಿಲಿಟರಿ ಶೈಲಿ) ದಾಳಿ ನಡೆಸಲಾಗಿತ್ತು. CRPF ಯೋಧರು ಸೇರಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು. ದಾಳಿಯಲ್ಲಿ ಲಷ್ಕರ್​​​-ಎ-ತೊಯ್ಬಾ ಸಂಘಟನೆಯ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ವಿಚಾರಣೆ ವೇಳೆ ಸಲೀಮ್ ಮುಖಿಮ್​ ಖಾನ್​​ನ ಹೆಸರು ತಿಳಿದು ಬಂದಿತ್ತು. ಆದರೆ ಸಲೀಮ್ ಭಾರತದಲ್ಲಿ ಇರದ ಹಿನ್ನಲೆಯಲ್ಲಿ ಆತನ ವಿರುದ್ಧ ಲುಕ್​ ಔಟ್ ನೊಟೀಸ್ ಹೊರಡಿಸಲಾಗಿತ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s