ಶಂಕಿತ ಉಗ್ರ ಸಲೀಮ್ ಮುಖೀಮ್​ನ ಕರಾಳ ಮುಖ ಅನಾವರಣ

ಮುಂಬೈನಲ್ಲಿ ಬಂಧಿತನಾಗಿರುವ ಲಷ್ಕರ್​-ಎ-ತಯಿಬಾ ಉಗ್ರ ಸಲೀಮ್ ಮುಖಿಮ್ ಖಾನ್ ಸಾಮಾನ್ಯನಲ್ಲ. ಆತನಿಗಾಗಿ ಉತ್ತರ ಪ್ರದೇಶ ಪೊಲೀಸರು ದೀರ್ಘಾವಧಿ ತಲಾಷ್ ಮಾಡಿದ್ದರು. ಎಷ್ಟೇ ಹುಡುಕಿದರು ಸಿಗದಿದ್ದಾಗ ಲುಕ್​ ಔಟ್ ನೊಟೀಸ್​ ಹೊರಡಿಸಿದ್ದರು. ಅದರ ಫಲವಾಗಿಯೇ ಮುಂಬೈ ವಿಮಾನ ನಿಲ್ದಾಣದಲ್ಲಿ ಸಲೀಮ್ ಮುಖಿಮ್​ ಖಾನ್​ನ ವಿಚಾರಣೆಯಾಗಿದ್ದು.. ಬಂಧನವೂ ಆಗಿದೆ.

ಸಲೀಮ್​ ವಿರುದ್ಧ ಇರುವ ಆರೋಪಗಳೇನು..?

ಸಲೀಮ್ ಮುಖಿಮ್ ಖಾನ್ ವಿರುದ್ಧ 2008ರಲ್ಲಿ ರಾಮ್​ಪುರ ಸಿಆರ್​ಪಿಎಫ್​ ಕ್ಯಾಂಪ್​ ಮೇಲಿನ ದಾಳಿಯ ಪ್ರಕರಣವಿದೆ. ಇದು ಅತ್ಯಂತ ಪ್ರಮುಖ ಕೇಸ್​. ಇದರ ಹೊರತು ಭಾರತದಲ್ಲಿ ಭಯೋತ್ಪಾದನ ಚಟುವಟಿಕೆ ಪ್ರತ್ಸಾಹ ನೀಡಿದ. ಹಣಕಾಸು ನೆರವು ಒದಗಿಸಿದ ಆರೋಪವಿದೆ. 2017ರ ಮೇ ತಿಂಗಳಲ್ಲಿ ಅಫ್ತಾಬ್ ಅಲಿಯ ಎಂಬಾತನನ್ನು ಉತ್ತರ ಪ್ರದೇಶದ ATS ಅಧಿಕಾರಿಗಳು ಬಂಧಿಸಿದ್ದರು. ಅಫ್ತಾಬ್ ಅಲಿಗೆ ಹಣಕಾಸು ನೆರವು ಒದಗಿಸಿದ್ದ ಸಲೀಮ್ ಮುಖಿಮ್ ಖಾನ್. ಇನ್ನು, ಅಫ್ತಾಬ್ ಅಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಭಾರತದಲ್ಲಿ ಒಬ್ಬ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಪಾಕಿಸ್ತಾನದ ಹೈಕಮಿಷನ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ. ಭಾರತದ ಸೈನೆಯ ದಾಖಲೆಗಳನ್ನು ಸಂಗ್ರಹಿಸಿದ್ದ. ಅಫ್ತಾಬ್​ನ ಬಂಧನದ ನಂತರ ಸಲೀಮ್​ ಖಾನ್​ ವಿರುದ್ಧ ನಿಗಾ ಹೆಚ್ಚಾಗಿತ್ತು.

ಸಲೀಮ್​ ಹೆಸೆರು ಮೊದಲು ಕೇಳಿ ಬಂದಿದ್ದು ಯಾವಾಗ..?

2008ರ CRPF ಕ್ಯಾಂಪ್​ ಮೇಲಿನ ದಾಳಿ ಪ್ರಕರಣದ ನಂತರ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದರು. ಇನ್ನು, ಬಂಧಿತ ಕೌಸರ್​ ಮತ್ತು ಷರೀಫ್​ ವಿಚಾರಣೆ ವೇಳೆ ಸಲೀಮ್ ಮುಖಿಮ್ ಖಾನ್ ಹೆಸರು ಬಾಯಿಬಿಟ್ಟರು. 2007ರಲ್ಲಿ ಇವರೊಂದಿಗೆ ಸಲೀಮ್ ಕೂಡ ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಯ ತರಬೇತಿ ಪಡೆದಿದ್ದ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಈಗ ಶಂಕಿತ ಉಗ್ರ ಸಲೀಮ್ ಮುಖಿಮ್ ಖಾನ್​ನನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಎಟಿಎಸ್​ ವಶದಲ್ಲಿರುವ ಸಲೀಮ್​ನನ್ನು ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಸಲೀಮ್​ನ ಬಂಧನದಿಂದ ಲಷ್ಕರ್​-ಎ-ತಯಿಬಾ ಸಂಘಟನೆಯ ಪ್ರಮುಖ ನೆಟ್​ವರ್ಕ್​​ ಬೇಧಿಸಿದ್ದಂತೆ ಆಗಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s