ಬೆಳಗಾವಿಯಲ್ಲಿ ಬೋಡೋ ಉಗ್ರನನ್ನು ಬಂಧಿಸಿದ ಅಸ್ಸಾಂ ಪೊಲೀಸರು

ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆಯಲ್ಲಿ ತರಬೇತಿ ಪಡೆದಿದ್ದ ಬೋಡೋ ಉಗ್ರನನ್ನು ಬೆಳಗಾವಿಯಲ್ಲಿ ಬಂಧಿಸಲಾಗಿದೆ. ಪೊಲೀಸರ ಕಣ್ತಪ್ಪಿಸುವ ಸಲುವಾಗಿ, ದಕ್ಷಿಣ ಭಾರತದ ಕಡೆಗೆ ಮುಖ ಮಾಡಿದ್ದ ಎಂದು ತಿಳಿದು ಬಂದಿದೆ. ಬೆಳಗಾವಿಯ ರಾಯಭಾಗ ತಾಲೂಕಿನ ಯಡ್ರಾವ್ ಗ್ರಾಮದ ಬಳಿ, ಶಂಕಿತನನ್ನು ಬಂಧಿಸಲಾಗಿದೆ. ಪ್ರುಸ್ನಾ ಫಿರ್ಲಾಂಗ್ (19) ಬಂಧಿತ ಯುವಕ. ಅಸ್ಸಾಂ ಮೂಲದ ಈತನನ್ನು ಅಲ್ಲಿಯ ಪೊಲೀಸರು ಬಹು ತಿಂಗಳಿಂದ ಶೋಧಿಸುತ್ತಿದ್ದರು. ಈತ ಬೆಳಗಾವಿಗೆ ಬಂದು ನೆಲೆಸಿದ್ದ. ಶಂಕಿತ ಪ್ರುಸ್ನಾ ಫಿರ್ಲಾಂಗ್, ಮಯನ್ಮಾರ್ನಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಮರಳಿದ್ದ. ಈತನ ಮೇಲೆ… Read More ಬೆಳಗಾವಿಯಲ್ಲಿ ಬೋಡೋ ಉಗ್ರನನ್ನು ಬಂಧಿಸಿದ ಅಸ್ಸಾಂ ಪೊಲೀಸರು

ಮೈಸೂರು ಸ್ಫೋಟ : ಸ್ಥಳೀಯ ಪೊಲೀಸರಿಂದ ಕೇಂದ್ರಿಯ ಸಂಸ್ಥೆಗೆ ತನಿಖೆ ವರ್ಗ

ಮೈಸೂರು ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ತನಿಖೆಯನ್ನು, ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಲಾಗಿದೆ. ಈ ಬಗ್ಗೆ ಅಂತಿಮ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ವಿವರ : 2016ರ ಆಗಸ್ಟ್ 1ರಂದು, ಸಂಜೆ 4 ಗಂಟೆಗೆ, ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟಿಸಿತ್ತು. ಸ್ಫೋಟದ ತೀವ್ರತೆಗೆ, ಶೌಚಾಲಯದ ಕಿಟಕಿ ಗಾಜುಗಳು ಪುಡಿಯಾಗಿದ್ದವು. ಸ್ಫೋಟದ ಬಳಿಕ ಎನ್‌ಐಎ ಅಧಿಕಾರಿಗಳು, ಅಂಧ್ರ ಮತ್ತು ಕೇರಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. NIAಗೆ ಪ್ರಕರಣ… Read More ಮೈಸೂರು ಸ್ಫೋಟ : ಸ್ಥಳೀಯ ಪೊಲೀಸರಿಂದ ಕೇಂದ್ರಿಯ ಸಂಸ್ಥೆಗೆ ತನಿಖೆ ವರ್ಗ